ಮಾತಿನ ಮನೆಯಲ್ಲಿ `ನಮ್ಮಣ್ಣ ಡಾನ್`
Posted date: 17 Mon, Oct 2011 ? 10:04:58 AM

ಲವ್‌ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ಅವರು ನಿರ್ಮಿಸುತ್ತಿರುವ ‘ನಮ್ಮಣ್ಣ ಡಾನ್ ಚಿತ್ರಕ್ಕೆ ರೇಣುಕಾಂಬ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಮಾಸಾಂತ್ಯಕ್ಕೆ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.
    ಹಾಸ್ಯ ಪ್ರಧಾನ ಈ ಚಿತ್ರದ ನಾಯಕರಾಗಿ ರಮೇಶ್‌ಅರವಿಂದ್ ಅಭಿನಯಿಸಿದ್ದಾರೆ. ರಮೇಶ್ ಈ ಚಿತ್ರದ ನಿರ್ದೇಶಕರೂ ಹೌದು. ಮೋನಾಪರವರೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
     ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ ‘ನಮ್ಮಣ್ಣ ಡಾನ್ಗೆ ಭಾಸ್ಕರ್ ಅವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೆಶ್‌ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed